Latest News

ಈ ಬ್ಲಾಗ್ ಅನ್ನು ಹುಡುಕಿ

Blogger ನಿಂದ ಸಾಮರ್ಥ್ಯಹೊಂದಿದೆ.

ಬ್ಲಾಗ್ ಆರ್ಕೈವ್

» »Unlabelled » ದುಬಾರೆಯಲ್ಲಿ ನಾಳೆಯಿಂದ ಆನೆ ಸ್ನಾನ ವೀಕ್ಷಣೆಗೆ ಹೊಸ ನಿಯಮ: 100 ಅಡಿ ದೂರದಲ್ಲಿ ನಿಲ್ಲಲು ಮಾತ್ರ ಅವಕಾಶ

 

ದುಬಾರೆಯಲ್ಲಿ ನಾಳೆಯಿಂದ ಆನೆ ಸ್ನಾನ ವೀಕ್ಷಣೆಗೆ ಹೊಸ ನಿಯಮ: 100 ಅಡಿ ದೂರದಲ್ಲಿ ನಿಲ್ಲಲು ಮಾತ್ರ ಅವಕಾಶ

ಮಡಿಕೇರಿ: ರಾಜ್ಯದ ಎಲ್ಲಾ ಸಾಕಾನೆ ಶಿಬಿರಗಳಲ್ಲಿ ಪ್ರವಾಸಿಗರ ಸುರಕ್ಷತೆಗಾಗಿ ಪ್ರಮಾಣಿತ ಕಾರ್ಯಾಚರಣೆ ವಿಧಾನ (ಎಸ್‌ಒಪಿ) ರೂಪಿಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ Eshwar Khandre ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ದುಬಾರೆ ಸಾಕಾನೆ ಶಿಬಿರದಲ್ಲಿ ಎರಡು ಆನೆಗಳ ನಡುವಿನ ಕಾದಾಟದ ವೇಳೆ ಮಹಿಳಾ ಪ್ರವಾಸಿಗರೊಬ್ಬರು ಮೃತಪಟ್ಟ ಘಟನೆ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಈ ಸಂಬಂಧ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಮುಖ್ಯ ವನ್ಯಜೀವಿ ಪರಿಪಾಲಕರಿಗೆ ಸಚಿವರು ನಿರ್ದೇಶನ ನೀಡಿದ್ದಾರೆ.

ನಾಳೆಯಿಂದಲೇ ರಾಜ್ಯದ ಎಲ್ಲಾ ಸಾಕಾನೆ ಶಿಬಿರಗಳಲ್ಲಿ ಪ್ರವಾಸಿಗರು ಆನೆಗಳ ಹತ್ತಿರ ಹೋಗುವುದನ್ನು ನಿಷೇಧಿಸಲಾಗಿದ್ದು, ಕನಿಷ್ಠ 100 ಅಡಿ ದೂರದಲ್ಲಿ ನಿಂತು ಮಾತ್ರ ಆನೆಗಳ ಸ್ನಾನ ವೀಕ್ಷಿಸಲು ಅವಕಾಶ ನೀಡಲಾಗುತ್ತದೆ. ಯಾವುದೇ ಕಾರಣಕ್ಕೂ ಪ್ರವಾಸಿಗರಿಗೆ ಆನೆಗಳ ಬಳಿ ಹೋಗಿ ಸೆಲ್ಫಿ ಅಥವಾ ಫೋಟೋ ತೆಗೆಸಿಕೊಳ್ಳಲು ಅವಕಾಶ ಇರುವುದಿಲ್ಲ ಎಂದು ಸೂಚಿಸಲಾಗಿದೆ.

ಇದಲ್ಲದೆ, ಪ್ರವಾಸಿಗರು ಆನೆಗಳಿಗೆ ಬಾಳೆಹಣ್ಣು, ಬೆಲ್ಲ, ಕಬ್ಬು ಸೇರಿದಂತೆ ಯಾವುದೇ ಆಹಾರವನ್ನು ಕೈಯಿಂದ ನೀಡುವುದನ್ನೂ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

ಪರಿಸರ ಪ್ರವಾಸೋದ್ಯಮ ಚಾರಣಪಥಗಳಲ್ಲಿ ಈಗಾಗಲೇ ಪ್ರವಾಸಿಗರ ಸುರಕ್ಷತೆಗಾಗಿ ಎಸ್‌ಒಪಿ ರೂಪಿಸಲಾಗಿದ್ದು, ಅದರ ಜಾರಿ ಖಚಿತವಾಗುವವರೆಗೆ ಕೆಲವು ಚಾರಣಪಥಗಳ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಇದೇ ಮಾದರಿಯಲ್ಲಿ ಸಾಕಾನೆ ಶಿಬಿರಗಳಿಗೂ ಸುರಕ್ಷತಾ ಮಾರ್ಗಸೂಚಿ ಜಾರಿಗೊಳಿಸಲು ಸಚಿವರು ಸೂಚಿಸಿದ್ದಾರೆ.

«
Next
ನವೀನ ಪೋಸ್ಟ್
»
Previous
ಹಳೆಯ ಪೋಸ್ಟ್

ಕಾಮೆಂಟ್‌ಗಳಿಲ್ಲ:

Leave a Reply